ಪೋರ್ಟಲ್ ಸಮಸ್ಯೆಗಳ ನಂತರ UPSC CSE 2026 ರ  Deadline  ಮುಂದೂಡಿದ್ದಾರೆ ; ಅರ್ಜಿಗಳು ಈಗ ಫೆಬ್ರವರಿ 27, 2026 ರವರೆಗೆ ತೆರೆದಿರುತ್ತವೆ

UPSC Last Date to Apply 2026: 933 IAS/IPS ಹುದ್ದೆಗಳಿಗೆ ಅಪ್ಲೈ ಮಾಡಲು ಕೊನೆ ಕ್ಷಣ! UPSC Last Date to Apply 2026: 933 IAS/IPS ಹುದ್ದೆಗಳಿಗೆ ಅಪ್ಲೈ ಮಾಡಲು ಕೊನೆ ಕ್ಷಣ!

ಐಎಎಸ್ (IAS) ಅಥವಾ ಐಪಿಎಸ್ (IPS) ಆಫೀಸರ್ ಆಗಿ ದೇಶ ಸೇವೆ ಮಾಡಬೇಕು ಅನ್ನೋದು ನಿಮ್ಮ ದೊಡ್ಡ ಕನಸಾಗಿದ್ದರೆ, ಈ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ. ಕೇಂದ್ರ ಲೋಕಸೇವಾ ಆಯೋಗವು (UPSC) ನಡೆಸುವ upsc cse (ಸಿವಿಲ್ ಸರ್ವಿಸಸ್ ಎಕ್ಸಾಮಿನೇಷನ್) 2026 ಪ್ರಿಲಿಮ್ಸ್ ಪರೀಕ್ಷೆಯ ರಿಜಿಸ್ಟ್ರೇಷನ್ ಕೊನೆಯ ಹಂತಕ್ಕೆ ಬಂದು ತಲುಪಿದೆ.

ನೀವಿನ್ನೂ ಅರ್ಜಿ ಸಲ್ಲಿಸಿಲ್ಲ ಅಂದರೆ, upsc last date to apply 2026 ಮುಗಿಯುವ ಮುನ್ನವೇ, ಅಂದರೆ ನಾಳೆಯೇ (ಫೆಬ್ರವರಿ 24) ನಿಮ್ಮ ಅರ್ಜಿಯನ್ನು ಕಂಪ್ಲೀಟ್ ಮಾಡಿ. ಇದರ ಸಂಪೂರ್ಣ ಡೀಟೇಲ್ಸ್ ಕೆಳಗಿದೆ.

ಪ್ರಮುಖ ದಿನಾಂಕಗಳು ಮತ್ತು ಹುದ್ದೆಗಳ ವಿವರ

ಅಧಿಕೃತ ನೋಟಿಫಿಕೇಶನ್ ಪ್ರಕಾರ, ಈ ವರ್ಷ ಕೇಂದ್ರ ಸರ್ಕಾರದ ಅಡಿಯಲ್ಲಿ ಒಟ್ಟು 933 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸಿವಿಲ್ ಸರ್ವಿಸಸ್ (CSE) ಮತ್ತು ಇಂಡಿಯನ್ ಫಾರೆಸ್ಟ್ ಸರ್ವಿಸ್ (IFS) ಎರಡೂ ಹುದ್ದೆಗಳಿಗೆ ಸೇರಿ ಒಂದೇ ಕಾಮನ್ ಪ್ರಿಲಿಮ್ಸ್ ಪರೀಕ್ಷೆ ನಡೆಯಲಿದೆ.

  • ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: 4 ಫೆಬ್ರವರಿ 2026
  • UPSC Last Date (ಕೊನೆಯ ದಿನಾಂಕ): 24 ಫೆಬ್ರವರಿ 2026 (ಸಂಜೆ 6:00 ಗಂಟೆಯವರೆಗೆ ಮಾತ್ರ).
  • ಪರೀಕ್ಷೆ ನಡೆಯುವ ತಿಂಗಳು: ಮೇ 2026

ನೀವು ಈ upsc form ಅನ್ನು ಸರಿಯಾದ ಸಮಯಕ್ಕೆ ತುಂಬಿದರೆ ಮಾತ್ರ ಮೇ ತಿಂಗಳಲ್ಲಿ ನಡೆಯುವ ಪರೀಕ್ಷೆ ಬರೆಯಲು ಸಾಧ್ಯ.

UPSC Online Apply: ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಬೇರೆಲ್ಲೂ ಹೋಗಬೇಕಿಲ್ಲ, ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಿಂದಲೇ ಸುಲಭವಾಗಿ upsc online apply ಮಾಡಬಹುದು. ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ:

  1. ಅಧಿಕೃತ ವೆಬ್‌ಸೈಟ್ ಭೇಟಿ: ಮೊದಲು ನಿಮ್ಮ ಬ್ರೌಸರ್‌ನಲ್ಲಿ upsconline.nic.in ಎಂದು ಟೈಪ್ ಮಾಡಿ (ಅಥವಾ ಗೂಗಲ್‌ನಲ್ಲಿ ಕೇವಲ upsconline ಎಂದು ಸರ್ಚ್ ಮಾಡಿ ಆಫೀಶಿಯಲ್ ಲಿಂಕ್ ಕ್ಲಿಕ್ ಮಾಡಿ).
  2. OTR ಲಾಗಿನ್: ಅಲ್ಲಿ One Time Registration (OTR) ಮೂಲಕ ನಿಮ್ಮ ಐಡಿ ಮತ್ತು ಪಾಸ್‌ವರ್ಡ್ ಹಾಕಿ ಲಾಗಿನ್ ಆಗಿ.
  3. ಅಪ್ಲಿಕೇಶನ್ ಲಿಂಕ್: ಡ್ಯಾಶ್‌ಬೋರ್ಡ್‌ನಲ್ಲಿ “Civil Services (Preliminary) Examination 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ಡೀಟೇಲ್ಸ್ ಭರ್ತಿ: ಫಾರ್ಮ್‌ನಲ್ಲಿ ಕೇಳಿರುವ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಎಜುಕೇಶನ್ ಡೀಟೇಲ್ಸ್ ಹಾಕಿ.
  5. ಫೀಸ್ ಮತ್ತು ಸಬ್ಮಿಟ್: ಫೋಟೋ, ಸಿಗ್ನೇಚರ್ ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ ನಿಮ್ಮ upsc application ಅನ್ನು ಫೈನಲ್ ಆಗಿ ಸಬ್ಮಿಟ್ ಮಾಡಿ.

UPSC Site Not Working? ಈ ಟಿಪ್ಸ್ ಫಾಲೋ ಮಾಡಿ

ಯಾವುದೇ ಸರ್ಕಾರಿ ಪರೀಕ್ಷೆಯಿರಲಿ, ಕೊನೆಯ ದಿನಗಳಲ್ಲಿ ಅರ್ಜಿ ಹಾಕಲು ಹೋದರೆ ಸರ್ವರ್ ಸಮಸ್ಯೆ ಬರುವುದು ಕಾಮನ್. ಅದರಲ್ಲೂ upsc last date to apply ಹತ್ತಿರ ಬಂದಾಗ, ಒಮ್ಮೆಲೇ ಲಕ್ಷಾಂತರ ಅಭ್ಯರ್ಥಿಗಳು ಲಾಗಿನ್ ಆಗುವುದರಿಂದ ವೆಬ್‌ಸೈಟ್ ತುಂಬಾ ಸ್ಲೋ ಆಗುತ್ತದೆ.

ಒಂದು ವೇಳೆ ನಿಮಗೆ upsc site not working ಅಥವಾ ‘Server Error’ ಎಂದು ಬಂದರೆ, ಗಾಬರಿಯಾಗಬೇಡಿ. ಈ ಟಿಪ್ಸ್ ಫಾಲೋ ಮಾಡಿ:

  • ಟ್ರಾಫಿಕ್ ಕಡಿಮೆ ಇರುವ ಸಮಯದಲ್ಲಿ, ಅಂದರೆ ಬೆಳಗಿನ ಜಾವ (Early Morning) ಅಥವಾ ತಡರಾತ್ರಿ ಲಾಗಿನ್ ಆಗಿ ಟ್ರೈ ಮಾಡಿ.
  • ಮೊಬೈಲ್ ಡೇಟಾ ಬದಲು ಹೈ-ಸ್ಪೀಡ್ ವೈಫೈ (Wi-Fi) ಇರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಬಳಸಿ.
  • ಬ್ರೌಸರ್ ಹಿಸ್ಟರಿ ಮತ್ತು ಕ್ಯಾಶೆ (Cache) ಕ್ಲಿಯರ್ ಮಾಡಿ ಮತ್ತೆ ರಿಫ್ರೆಶ್ ಮಾಡಿ.

ನೆನಪಿರಲಿ: ತಾಂತ್ರಿಕ ದೋಷಗಳಿಂದಾಗಿ ಕೊನೆ ಗಳಿಗೆಯಲ್ಲಿ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ upsc last date ಅಂದರೆ ಫೆಬ್ರವರಿ 24ರ ಸಂಜೆ 6 ಗಂಟೆಯವರೆಗೂ ಕಾಯಬೇಡಿ, ಇಂದೇ ನಿಮ್ಮ ಅರ್ಜಿಯನ್ನು ಕಂಪ್ಲೀಟ್ ಮಾಡಿಬಿಡಿ.

ಆಲ್ ದಿ ಬೆಸ್ಟ್! ನಿಮ್ಮ IAS ಕನಸು ನನಸಾಗಲಿ.

UPSC CSE 2026: ಐಎಎಸ್ (IAS) ಆಗುವ ಕನಸಿದ್ಯಾ? ಪ್ರಿಲಿಮ್ಸ್ ಪರೀಕ್ಷೆಗೆ ಅಪ್ಲೈ ಮಾಡಲು ನಾಳೆಯೇ ಕೊನೇ ದಿನ!

WhatsApp Group Join Now
Telegram Group Join Now
Instagram Group Join Now

Leave a Reply

Your email address will not be published. Required fields are marked *

Translate »